ಹಗಲಲ್ಲಿ ನೀ ಬಣ್ಣ
ಇರುಳು ನೀ ತಂಪು
ನಿನ್ನ ಕಂಡ ಕ್ಷಣ
ಮನದಲ್ಲಿ ಒಲವು
ನಿನ್ನ ಅರ್ಪಿಸಿದಾಗ
ಮನದಲ್ಲಿ ಭಕ್ತಿ
ನಿನ್ನ ಮುಡಿದಾಗ
ಮುಖದಲ್ಲಿ ಚೆಲುವು
ನೀನು ಮಾಲೆಯಾಗಿ
ನಮಗೆ ಚಿರವು
ನಿನ್ನ ಸ್ಪರ್ಶಕ್ಕೆ
ಮೈಯೆಲ್ಲ ಹಿತವು
ನಿನ್ನ ಕಂಪಿನಲಿ
ನಮಗೆಲ್ಲ ಹರುಷ
ನೀನು ಹಣ್ಣಾಗಿ
ನಮಗೆಲ್ಲ ಗೆಲುವು
ನೀ ಭುವಿಗಿಳಿದು
ಫಲವಾಯ್ತು ಮಣ್ಣು
ನೀ ರಸಭರಿತ
ನಮಗೆಲ್ಲ ಜೇನು
ನೀ ಮತ್ತೆ ಮರವಾಗೆ
ಜಗವೆಲ್ಲ ಹೂವು
No comments:
Post a Comment