ಜೋಗುಳ ಹಾಡುವ ಹೊತ್ತು
ಕಣ್ಣಲ್ಲಿ ನಿದ್ದೆಯ ಹೊತ್ತು
ಕತೆಯನ್ನು ನೆನೆಯುತ್ತ ಮಲಗೋಳೆ
ನೀನೆ ನೀನೆ ನೀನೆ ನಮ್ಮ ಕನಸು
ಚಂಗನೆ ನೆಗೆದು
ಸರಸರನೆ ನಡೆದು
ಸುಯ್ಯೆಂದು ಸರೆಯೋಳೆ
ಕೋಪದಿ ಒಗೆದು
ತಾಪದಿ ಸುರಿದು
ಮುದ್ದಲ್ಲಿ ಮುಳುಗೋಳೆ
ಕತೆಯ ನಾದಕ್ಕೆ ಕರಗೊಳೆ
ನೀನೆ ನೀನೆ ನೀನೆ ನಮ್ಮ ಕವನ
ಅಂದದಿ ಬಗೆದು
ಚಂದದಿ ನಡೆದು
ತಧಿಮಿಯ ನಲಿಯೋಳೆ
ತನ್ನಲ್ಲಿ ತಾನೆ
ಹಾಡಿ ಕುಣಿಯುತ್ತ
ಎಲ್ಲೆಡೆ ಸುಳಿಯೋಳೆ
ಎಲ್ಲರ ಮೆಚ್ಚಲ್ಲಿ ಮಿನುಗೊಳೆ
ನೀನೆ ನೀನೆ ನೀನೆ ನಮ್ಮ ತಾರೆ
--------ಜೀವಿಶಿವು
No comments:
Post a Comment