ನಿನ್ನ ತಿಳಿವಿನ ಹರಿವು
ನನ್ನ ಎದೆಯೊಳಗಿಳಿದು
ಮನದಿ ಮೂಡಿದ ನೋಡು
ಉದಯ ಸೂರ್ಯ
ನಿನ್ನೊಂದೊಂದು ಬಿಂದು
ಕಿರಣ ಕಿರಣವ ಹೀರಿ
ನಯನದುಂಬಿದೆ ನೋಡು
ಅಚ್ಚರಿಯ ಬೆಳಕು
ನಿನ್ನ ಕರದಲಿಪಿಡಿದು
ರವಿಯ ವಂದಿಸೆ ನೋಡು
ಹೃದಯದುಂಬಿದೆ ಧನ್ಯ
ದೈವ ಕೃಪೆಯು
ನಿನ್ನೊಳಗೆ ನೆನೆಯುತ್ತ
ಕಳೆದೆ ನಿನ್ನೆಯ ಕರ್ಮ
ಜೀವದುಂಬಿದೆ ನೋಡು
ಪಡೆದ ಪುಣ್ಯ
ನಿನ್ನೊಂದೊಂದು ತಿರುವು
ಚಿತ್ತವನು ಬಿಗಿಯುತ್ತ
ಒಳಗಣ್ಣ ತೆರೆಸಿದೆ
ಋತದ ಚಲನೆ
ನಿನ್ನ ಹೆಜ್ಜೆಗೆ ಹೆಜ್ಜೆ
ಜಗವೆಲ್ಲ ಹರಿದಿದೆ
ಬಿಂದು ಬಿಂದುವಿನಲ್ಲು
ಆ ಕಾಲಗರ್ಭ
ನನ್ನ ಎದೆಯೊಳಗಿಳಿದು
ಮನದಿ ಮೂಡಿದ ನೋಡು
ಉದಯ ಸೂರ್ಯ
ನಿನ್ನೊಂದೊಂದು ಬಿಂದು
ಕಿರಣ ಕಿರಣವ ಹೀರಿ
ನಯನದುಂಬಿದೆ ನೋಡು
ಅಚ್ಚರಿಯ ಬೆಳಕು
ರವಿಯ ವಂದಿಸೆ ನೋಡು
ಹೃದಯದುಂಬಿದೆ ಧನ್ಯ
ದೈವ ಕೃಪೆಯು
ನಿನ್ನೊಳಗೆ ನೆನೆಯುತ್ತ
ಕಳೆದೆ ನಿನ್ನೆಯ ಕರ್ಮ
ಜೀವದುಂಬಿದೆ ನೋಡು
ಪಡೆದ ಪುಣ್ಯ
ನಿನ್ನೊಂದೊಂದು ತಿರುವು
ಚಿತ್ತವನು ಬಿಗಿಯುತ್ತ
ಒಳಗಣ್ಣ ತೆರೆಸಿದೆ
ಋತದ ಚಲನೆ
ನಿನ್ನ ಹೆಜ್ಜೆಗೆ ಹೆಜ್ಜೆ
ಜಗವೆಲ್ಲ ಹರಿದಿದೆ
ಬಿಂದು ಬಿಂದುವಿನಲ್ಲು
ಆ ಕಾಲಗರ್ಭ